Lord Vayu

ಮಧ್ವ ನಾಮ (ಶ್ರೀಪಾದರಾಜ ವಿರಚಿತ)

(Madhva Nama in Kannada)

Sripadaraja

Madhva Nama is a profound devotional composition authored by the great Haridasa saint Sripadaraja. The stotra serves as a dedicated tribute to Sri Madhvacharya, revered by followers of the Dvaita philosophy as the third avatar of Vayu. Through poetic verses set to raga Saurashtra, the composition highlights the supreme role of Vayu as the primary mediator between the individual soul and Lord Vishnu. Reciting this hymn is believed to cleanse the mind of ignorance, strengthen devotion to the Supreme Being, and bestow the grace of the Guru, ultimately guiding the devotee toward spiritual liberation.

(ರಾಗ – ಸೌರಾಷ್ಟ್ರ, ಆದಿತಾಲ)
ಜಯ ಜಯ ಜಗತ್ರಾಣ ಜಗದೊಲಗೆ ಸುತ್ರಾಣ
ಅಖಿಲಗುಣ ಸದ್ಧಾಮ ಮಧ್ವನಾಮ ॥ ಪ ॥
ಆವ ಕಚ್ಛಪ ರೂಪದಿನ್ದಲಣ್ಡೋದಕವ
ಓವಿ ಧರಿಸಿದ ಶೇಷಮೂರುತಿಯನು
ಆವವನ ಬಲಿವಿಡಿದು ಹರಿಯ ಸುರರೈಯ್ದುವರು
ಆ ವಾಯು ನಮ್ಮ ಕುಲಗುರುರಾಯನು ॥ 1 ॥
ಆವವನು ದೇಹದೊಲಗಿರಲು ಹರಿ ನೆಲಸಿಹನು
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದಾ ಒಲ ಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು ॥ 2 ॥
ಕರುಣಾಭಿಮಾನಿ ಸುರರು ದೇಹವ ಬಿಡಲು
ಕುರುಡ ಕಿವುಡ ಮೂಕನೆನ್ದೆನಿಸುವ
ಪರಮ ಮುಖ್ಯ ಪ್ರಾಣ ತೊಲಗಲಾ ದೇಹವನು
ಅರಿತು ಪೆಣನೆನ್ದು ಪೇಲುವರು ಬುಧಜನ ॥ 3 ॥
ಸುರರೊಲಗೆ ನರರೊಲಗೆ ಸರ್ವಭೂತಗಲೊಲಗೆ
ಪರತರನೆನಿಸಿ ನಿಯಾಮಿಸಿ ನೆಲಸಿಹ
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಲು
ಗುರುಕುಲತಿಲಕ ಮುಖ್ಯ ಪವಮಾನನು ॥ 4 ॥
ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆನ್ದು
ವಾತಸುತ ಹನುಮನ್ತನೆನ್ದೆನಿಸಿದ
ಪೋತ ಭಾವದಿ ತರಣಿ ಬಿಮ್ಬಕ್ಕೆ ಲಙ್ಘಿಸಿದ
ಈತಗೆಣೆಯಾರು ಮೂಲೋಕದೊಲಗೆ ॥ 5 ॥
ತರಣಿಗಭಿಮುಖನಾಗಿ ಶಬ್ದಶಾಸ್ತ್ರವ ಪಠಿಸಿ
ಉರವಣಿಸಿ ಹಿನ್ದುಮುನ್ದಾಗಿ ನಡೆದ
ಪರಮ ಪವಮಾನ ಸುತ ಉದಯಾಸ್ತ ಶೈಲಗಲ
ಭರದಿಯೈದಿದಗೀತಗುಪಮೆ ಉಣ್ಟೇ ॥ 6 ॥
ಅಖಿಲ ವೇದಗಲ ಸಾರ ಪಠಿಸಿದನು ಮುನ್ನಲ್ಲಿ
ನಿಖಿಲ ವ್ಯಾಕರಣಗಲ ಇವ ಪೇಲಿದ
ಮುಖದಲ್ಲಿ ಕಿಞ್ಚಿದಪಶಬ್ದ ಇವಗಿಲ್ಲೆನ್ದು
ಮುಖ್ಯಪ್ರಾಣನನು ರಾಮನನುಕರಿಸಿದ ॥ 7 ॥
ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ
ಧರಣಿಸುತೆಯಲ ಕಣ್ಡು ಧನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಲ
ಉರುಹಿ ಲಙ್ಕೆಯ ಬನ್ದ ಹನುಮನ್ತನು ॥ 8 ॥
ಹರಿಗೆ ಚೂಡಾಮಣಿಯನಿತ್ತು ಹರಿಗಲ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು
ಒರಸಿ ರಣದಲಿ ದಶಶಿರನ ಹುಡಿಗುಟ್ಟಿದ
ಮೆರೆದ ಹನುಮನ್ತ ಬಲವನ್ತ ಧೀರ ॥ 9 ॥
ಉರಗಬನ್ಧಕೆ ಸಿಲುಕಿ ಕಪಿವರರು ಮೈಮರೆಯೆ
ತರಣಿಕುಲತಿಲಕನಾಜ್ಞೆಯ ತಾಲಿದ
ಗಿರಿಸಹಿತ ಸಞ್ಜೀವನವ ಕಿತ್ತು ತನ್ದಿತ್ತ
ಹರಿವರಗೆ ಸರಿಯುಣ್ಟೆ ಹನುಮನ್ತಗೆ ॥ 10 ॥
ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಲಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡೆವೆನೆನೆ ಹನುಮನ್ತ
ನಿಜ ಭಕುತಿಯನೆ ಬೇಡಿ ವರವ ಪಡೆದ ॥ 11 ॥
ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥನೊಡನೆ
ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ
ಆ ಮಹಿಮ ನಮ್ಮ ಕುಲಗುರುರಾಯನು ॥ 12 ॥
ಕರದಿನ್ದ ಶಿಶುಭಾವನಾದ ಭೀಮನ ಬಿಡಲು
ಗಿರವಡಿದು ಶತಶೃಙ್ಗವೆನ್ದೆನಿತು
ಹರಿಗಲ ಹರಿಗಲಿಂ ಕರಿಗಲ ಕರಿಗಲಿಂ
ಅರೆವ ವೀರರಿಗೆ ಸುರ ನರರು ಸರಿಯೇ ॥ 13 ॥
ಕುರುಪ ಗರಲವನಿಕ್ಕೆ ನೆರೆ ಉಣ್ಡು ತೇಗಿ
ಹಸಿದುರಗಗಲ ಮ್ಯಾಲೆ ಬಿಡಲದನೊರಸಿದ
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ ॥ 14 ॥
ಅಲ್ಲಿರ್ದ ಬಕ ಹಿಡಿಮ್ಬಕರೆಮ್ಬ ರಕ್ಕಸರ
ನಿಲ್ಲದೊರಸಿದ ಲೋಕಕಣ್ಟಕರನು
ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ ॥ 15 ॥
ರಾಜಕುಲ ವಜ್ರನೆನಿಸಿದ ಮಾಗಧನ ಸೀಲಿ
ರಾಜಸೂಯಾಗವನು ಮಾಡಿಸಿದನು
ಆಜಿಯೊಲು ಕೌರವರ ಬಲವ ಸವರುವೆನೆನ್ದು
ಮೂಜಗವರಿಯೆ ಕಙ್ಕಣ ಕಟ್ಟಿದ ॥ 16 ॥
ದಾನವರ ಸವರಬೇಕೆನ್ದು ಬ್ಯಾಗ
ಮಾನನಿಧಿ ದ್ರೌಪದಿಯ ಮನದಿಙ್ಗಿತವನರಿತು
ಕಾನನವ ಪೊಕ್ಕು ಕಿಮ್ಮಾರಾದಿಗಲ ಮುರಿದು
ಮಾನಿನಿಗೆ ಸೌಗನ್ಧಿಕವನೆ ತನ್ದ ॥ 17 ॥
ದುರುಲ ಕೀಚಕನು ತಾ ದ್ರೌಪದಿಯ ಚೆಲುವಿಕೆಗೆ
ಮರುಲಾಗಿ ಕರಕರಿಯ ಮಾಡಲವನಾ
ಗರಡಿ ಮನೆಯಲಿ ಬರಸಿ ಅವನನ್ವಯವ
ಕುರುಪನಟ್ಟಿದ ಮಲ್ಲಕುಲವ ಸದೆದ ॥ 18 ॥
ಕೌರವರ ಬಲ ಸವರಿ ವೈರಿಗಲ ನೆಗ್ಗೊತ್ತಿ
ಓರನ್ತೆ ಕೌರವನ ಮುರಿದು ಮೆರೆದ
ವೈರಿ ದುಶ್ಶಾಸನ್ನ ರಣದಲ್ಲಿ ಎಡಗೆಡಹಿ
ವೀರ ನರಹರಿಯ ಲೀಲೆಯ ತೋರಿದ ॥ 19 ॥
ಗುರುಸುತನು ಸಙ್ಗರದಿ ನಾರಾಯಣಾಸ್ತ್ರವನು
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು
ಹರಿಕೃಪೆಯ ಪಡೆದಿರ್ದ ಭೀಮ ಹುಙ್ಕಾರದಿಂ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ ॥ 20 ॥
ಚಣ್ಡ ವಿಕ್ರಮನು ಗದೆಗೊಣ್ಡು ರಣದಿ ಭೂ
ಮಣ್ಡಲದೊಲಿದಿರಾನ್ತ ಖಲರನೆಲ್ಲಾ
ಹಿಣ್ಡಿ ಬಿಸುಟಿಹ ವೃಕೋದರನ ಪ್ರತಾಪವನು
ಕಣ್ಡು ನಿಲ್ಲುವರಾರು ತ್ರಿಭುವನದೊಲು ॥ 21 ॥
ದಾನವರು ಕಲಿಯುಗದೊಲವತರಿಸಿ ವಿಬುಧರೊಲು
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಲದೊಲವತರಿಸಿ
ಮಾನನಿಧಿ ಮಧ್ವಾಖ್ಯನೆನ್ದೆನಿಸಿದ ॥ 22 ॥
ಅರ್ಭಕತನದೊಲೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಲ ಶಾಸ್ತ್ರವ ಪಠಿಸಿದ
ಉರ್ವಿಯೊಲು ಮಾಯೆ ಬೀರಲು ತತ್ತ್ವಮಾರ್ಗವನು
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ ॥ 23 ॥
ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಮ್ಬ
ದುರ್ವಾದಿಗಲ ಮತವ ನೆರೆ ಖಣ್ಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆನ್ದರುಹಿದಾ
ಶರ್ವಾದಿ ಗೀರ್ವಾಣ ಸನ್ತತಿಯಲಿ ॥ 24 ॥
ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಲ ವೇದಾರ್ಥಗಲನು
ಪದುಮನಾಭನ ಮುಖದಿ ತಿಲಿದು ಬ್ರಹ್ಮತ್ವ
ಯೈದಿದ ಮಧ್ವಮುನಿರಾಯಗಭಿವನ್ದಿಪೆ ॥ 25 ॥
ಜಯ ಜಯತು ದುರ್ವಾದಿಮತತಿಮಿರ ಮಾರ್ತಾ0ಡ
ಜಯಜಯತು ವಾದಿಗಜಪಞ್ಚಾನನ
ಜಯಜಯತು ಚಾರ್ವಾಕಗರ್ವಪರ್ವತಕುಲಿಶ
ಜಯಜಯತು ಜಗನ್ನಾಥ ಮಧ್ವನಾಥ ॥ 26 ॥
ತುಙ್ಗಕುಲ ಗುರುವರನ ಹೃತ್ಕಮಲದಲಿ ನಿಲಿಸಿ
ಭಙ್ಗವಿಲ್ಲದೆ ಸುಖವ ಸುಜನಕೆಲ್ಲ
ಹಿಙ್ಗದೆ ಕೊಡುವ ನಮ್ಮ ಮಧ್ವಾನ್ತರಾತ್ಮಕ
ರಙ್ಗವಿಠಲನೆನ್ದು ನೆರೆ ಸಾರಿರೈ ॥ 27 ॥
ಫಲಶ್ರುತಿ (ಜಗನ್ನಾಥದಾಸ ವಿರಚಿತ)
ಸೋಮ ಸೂರ್ಯೋಪರಾಗದಿ ಗೋಸಹಸ್ರಗಲ
ಭೂಮಿದೇವರಿಗೆ ಸುರನದಿಯ ತಟದಿ
ಶ್ರೀಮುಕುನ್ದಾರ್ಪಣವೆನುತ ಕೊಟ್ಟ ಫಲಮಕ್ಕು
ಈ ಮಧ್ವನಾಮ ಬರೆದೋದಿದರ್ಗೆ ॥ 1 ॥
ಪುತ್ರರಿಲ್ಲದವರು ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು ಸಕಲ
ಶತ್ರುಗಲು ಕೆಡುವರಪಮೃತ್ಯು ಬರಲಞ್ಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ ॥ 2 ॥
ಶ್ರೀಪಾದರಾಯ ಪೇಲಿದ ಮಧ್ವನಾಮ ಸಂ
ತಾಪಕಲೆದಖಿಲ ಸೌಖ್ಯವನೀವುದು
ಶ್ರೀಪತಿ ಜಗನ್ನಾಥವಿಠಲನ ತೋರಿ ಭವ
ಕೂಪಾರದಿನ್ದ ಕಡೆ ಹಾಯಿಸುವುದು ॥ 3 ॥

Explore More